ಅವಕಾಶ ಸಿಕ್ಕರೆ ಚುನಾವಣಾ ಅಖಾಡಕ್ಕೆ ಧುಮುಕುವೆ: ನಿರ್ದೇಶಕಿ ರೂಪಾ ಅಯ್ಯರ್ - election
ಪಕ್ಷದ ಮುಖಂಡರು ಚುನಾವಣೆಗೆ ಸ್ಪರ್ಧಿಸಿ ಅಂದ್ರೆ ನಾನು ಖಂಡಿತ ಚುನಾವಣೆಗೆ ನಿಲ್ಲುತ್ತೇನೆ ಎಂದು ಖ್ಯಾತ ನಿರ್ದೇಶಕಿ ರೂಪಾ ಅಯ್ಯರ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇಂದು ಮೈಸೂರಿನ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತವಾಗಿ ಆಯುಷ್ಮಾನ್ ಹೆಲ್ತ್ ಕಾರ್ಡ್ ಕಾರ್ಯಕ್ರಮ ಉದ್ಘಾಟನೆ ಬಳಿಕ ರೂಪ ಅಯ್ಯರ್ ಈ ವಿಷಯ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರಿಗೂ ಈ ಹೆಲ್ತ್ ಕಾರ್ಡನ್ನು ಉಚಿತವಾಗಿ ಮಾಡಿಸಿಕೊಟ್ಟರು. ನಂತರ ಮಾತನಾಡಿದ ನಿರ್ದೇಶಕಿ ಈ ಕಾರ್ಡ್ ಪತ್ರಕರ್ತರು ಅನಾರೋಗ್ಯಕ್ಕೀಡಾದರೆ, ಉಪಯೋಗವಾಗುತ್ತೆ. ಇದರ ಮೂಲಕ 1.50 ಲಕ್ಷದಿಂದ 5 ಲಕ್ಷದವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದು ತಿಳಿಸಿದರು. ಇನ್ನು, ತನಗೆ ಪಕ್ಷ ಏನೇ ಕೆಲಸ ಕೊಟ್ಟರು ಅದನ್ನು ಶ್ರಮವಹಿಸಿ ಅಚ್ಚುಕಟ್ಟಾಗಿ ಮಾಡುತ್ತೇನೆ. ಇಂತಲ್ಲೇ ಸೀಟ್ ಕೊಡಿ ಎಂದು ಕೇಳುವುದಿಲ್ಲ, ಚುನಾವಣೆಗೆ ನಿಂತುಕೊಳ್ಳಿ ಎಂದರೆ ನಾನು ಖಂಡಿತ ಸ್ಪರ್ಧಿಸುತ್ತೇನೆ ಎಂದರು.
Last Updated : Sep 20, 2019, 6:04 PM IST