ಸದ್ಯಕ್ಕೆ ಚಲನಚಿತ್ರ ಶೂಟಿಂಗ್ ಬೇಡ: ರಾಕ್ಲೈನ್ ವೆಂಕಟೇಶ್ ಸಲಹೆ - film shooting
ಸದ್ಯ ಧಾರವಾಹಿ ಶೂಟಿಂಗ್ ಮಾಡಲು ಸರ್ಕಾರ ಅನುಮತಿ ನೀಡಿದೆ. ಅದು ಒಳ್ಳೆಯ ವಿಷಯ. ಆದ್ರೆ ಮುಂದೆ ಏನಾಗುತ್ತೋ ನೋಡಿಕೊಂಡು ಸಿನಿಮಾ ಶೂಟಿಂಗ್ ಮಾಡಿದ್ರೆ ಒಳ್ಳೆಯದು. ನಾನೊಬ್ಬ ನಿರ್ಮಾಪಕನಾಗಿ ಹೇಳುವುದೆಂದರೆ ಸದ್ಯಕ್ಕೆ ಶೂಟಿಂಗ್ ಮಾಡೋದು ಬೇಡ, ಸಿನಿಮಾ ಶೂಟಿಂಗ್ ಅಂದ್ರೆ ನೂರಾರು ಜನ ಇರ್ತಾರೆ ನಾವು ಸಾಮಾಜಿಕ ಅಂತರ ಕಾಪಾಡಿಕೊಳ್ಳೋದಕ್ಕೆ ಕಷ್ಟ ಆಗುತ್ತೆ. ಆದ್ದರಿಂದ ಸದ್ಯಕ್ಕೆ ಶೂಟಿಂಗ್ ಆರಂಭಿಸೋದು ಬೇಡ. ಅಲ್ಲದೇ ಸರ್ಕಾರ ಚಿತ್ರಮಂದಿರ ಓಪನ್ ಮಾಡೋದಕ್ಕೆ ಕೂಡಾ ಅಲೋಚನೆ ಮಾಡ್ತಿದೆ. ಏನಾಗುತ್ತೋ ನೋಡೋಣ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.