ದೇಗುಲದ ಎರಡು ಹುಂಡಿ ಹಣ ದೋಚಿದ ಕಳ್ಳರು: ಗ್ರಾಮಸ್ಥರ ಆಕ್ರೋಶ - ಚಿತ್ರದುರ್ಗದ ದೇವಸ್ಥಾನದ ಹುಂಡಿ ಕಳ್ಳತನ
ಚಿತ್ರದುರ್ಗ ತಾಲೂಕಿನ ದೊಡ್ಡಗಟ್ಟ ಗ್ರಾಮದ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದಲ್ಲಿ ಎರಡು ಕಾಣಿಕೆ ಹುಂಡಿಗಳ ಬೀಗ ಮುರಿದು ಕಳ್ಳರು ಹಣ ದೋಚಿದ್ದಾರೆ. ಒಂದು ಕಾಣಿಕೆ ಹುಂಡಿಯಲ್ಲಿದ್ದ ಹಣ ತೆಗೆದುಕೊಂಡು, ಹುಂಡಿ ಸಮೇತ ಪಾರಾರಿಯಾಗಿದ್ದಾರೆ. ಇನ್ನೊಂದು ಹುಂಡಿಯನ್ನು ದೇವಾಲಯದ ಆವರಣದಲ್ಲಿ ಬಿಸಾಡಿ ಎಸೆದು ಹೋಗಿದ್ದಾರೆ. ತುರುವನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.