ಸ್ಮಾರ್ಟ್ ಸಿಟಿಗೆ ಅವಮಾನ ಮಾಡುತ್ತಿವೆ ತುಮಕೂರು ನಗರದ ಗುಂಡಿಗಳು! - tumkur news
ತುಮಕೂರು ನಗರದ ಬಿ.ಹೆಚ್ ರಸ್ತೆ, ಅಶೋಕ ರಸ್ತೆ, ಎಂ.ಜಿ ರಸ್ತೆ ಇನ್ನು ಮುಂತಾದ ರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ರಸ್ತೆ ಸವಾರರಿಗೆ ಇನ್ನಿಲ್ಲದ ತೊಂದರೆ ಆಗುತ್ತಿದೆ. ಎಂ.ಜಿ ರಸ್ತೆಯಲ್ಲಿಯೂ ಕಾಮಗಾರಿ ನಡೆಯುತ್ತಿದ್ದು, ಗುಂಡಿ ತೆಗೆದು ಹಾಗೆಯೇ ಬಿಟ್ಟಿರುವುದರಿಂದ ಮಳೆ ನೀರು ತುಂಬಿಕೊಂಡಿದೆ. ಇಲ್ಲಿ ಸಂಚರಿಸುವವರು ಜೀವ ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ. ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜನರು ಆಗ್ರಹಿಸಿದ್ದಾರೆ.