ಬಸ್-ಸ್ಕೂಟರ್ ನಡುವೆ ಡಿಕ್ಕಿ: ವಿಡಿಯೋ - ಬಸ್-ಸ್ಕೂಟರ್ ನಡುವೆ ಡಿಕ್ಕಿ
ಉಳ್ಳಾಲ: ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಲಪಾಡಿ ಬಳಿ ಸಂಭವಿಸಿದೆ. ಉದ್ಯಾವರ ಮಾಡ ನಿವಾಸಿ ತುಳಸಿ (35) ಗಾಯಾಳು. ತಲಪಾಡಿಯಲ್ಲಿ ಟಯರ್ ಅಂಗಡಿ ಇಟ್ಟುಕೊಂಡಿದ್ದ ತುಳಸಿ ಅವರು ಮನೆಯಿಂದ ಸ್ಕೂಟರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನಿಂದ ಕಾಸರಗೋಡು ಮಾರ್ಗವಾಗಿ ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಸ್ಕೂಟರ್ ಬಸ್ಸಿನಡಿ ಸಿಲುಕಿದೆ. ಈ ಕುರಿತಾದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.