ನೆರೆಹಾನಿ ಪ್ರದೇಶಗಳಿಗೆ ಸಚಿವ ಆರ್.ಅಶೋಕ್ ಭೇಟಿ: ಸಂತ್ರಸ್ತರಿಗೆ ಸಾಂತ್ವನ - ನೆರೆಹಾನಿ ಪ್ರದೇಶಗಳಿಗೆ ಆರ್.ಅಶೋಕ್ ಭೇಟಿ
ಕಾರವಾರ (ಉತ್ತರಕನ್ನಡ): ಕಂದಾಯ ಸಚಿವ ಆರ್.ಅಶೋಕ್ ಹೊನ್ನಾವರ ತಾಲೂಕಿನಲ್ಲಿ ನೆರೆಹಾನಿಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರೊಂದಿಗೆ ತಾಲೂಕಿನ ಚಿಕ್ಕನಕೋಡ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರ ಅಹವಾಲು ಆಲಿಸಿದರು.