ಇನ್ಮುಂದೆ ಮೈಸೂರು ವಿವಿಗೆ ಖಾಸಗಿ ವಾಹನ ನಿರ್ಬಂಧ: ಬ್ಯಾಟರಿ ಚಾಲಿತ ವಾಹನ ಸೇವೆ ಆರಂಭ! - ಮೈಸೂರು ವಿವಿಯಲ್ಲಿ ಬ್ಯಾಟರಿ ಚಾಲಿತ ವಾಹನ ಸೇವೆ ಆರಂಭ
ಮೈಸೂರು: ಮಾನಸ ಗಂಗೋತ್ರಿಯ ಆವರಣದ ಒಳಗೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿ ಪರಿಸರಸ್ನೇಹಿ ಬ್ಯಾಟರಿ ಚಾಲಿತ ವಾಹನ ಸೇವೆ ಆರಂಭಿಸಲಾಗಿದೆ. ಪ್ರಸಿದ್ಧ ವಿವಿಗಳಲ್ಲಿ ಒಂದಾದ ಮೈಸೂರು ವಿವಿಯ ಆವರಣ ಹಾಳಾಗದಿರಲಿ ಎಂಬ ಉದ್ದೇಶದಿಂದ ಹಾಗೂ ಕ್ಯಾಂಪಸ್ ಒಳಗೆ ತರಗತಿಗಳಿಗೆ ಶಬ್ಧ ಮಾಲಿನ್ಯ ಉಂಟಾಗಬಾರದು ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.