ಮರಳುಗಾರಿಕೆಗೆ ನಿರ್ಬಂಧ.. ಕಾರವಾರದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಲು ಸಂಕಷ್ಟ - ಮರಳುಗಾರಿಕೆಗೆ ನಿರ್ಬಂಧ
ಕಡಲನಗರಿ ಕಾರವಾರದಲ್ಲಿ ಮರಳುಗಾರಿಕೆಗೆ ಬ್ರೇಕ್ ಬಿದ್ದು ಮೂರು ವರ್ಷವಾಗಿದೆ. ಕಾಳಿ ನದಿ ಅತಿ ಸೂಕ್ಷ್ಮ ವಲಯ ಎನ್ನುವ ಕಾರಣಕ್ಕೆ ಕೇಂದ್ರ ಪರಿಸರ ಇಲಾಖೆ ಮರಳುಗಾರಿಕೆ ನಿರ್ಬಂಧಿಸಿದೆ. ಆದರೆ, ಈ ಪರಿಣಾಮ ಮರಳು ಸಿಗದೆ ಜನಸಾಮಾನ್ಯರು ಸೇರಿ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.