ಕರ್ನಾಟಕ

karnataka

ETV Bharat / videos

ವಾಯುಭಾರ ಕುಸಿತ.. ಕಾರವಾರ ಕಡಲತೀರದಲ್ಲಿ ಬೀಡುಬಿಟ್ಟ ಬೋಟ್‌ಗಳು! - heavy rain fall in uttar kannada

By

Published : Sep 12, 2020, 8:26 PM IST

ರಾಜ್ಯದ ಕರಾವಳಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಸೇರಿ ಕೆಲವೆಡೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಸಮುದ್ರದಲ್ಲಿ ಗಾಳಿ ಸಹಿತ ಅಲೆಗಳ ಅಬ್ಬರ ಜೋರಾಗಿದೆ. ಮೂರು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಸೂಚನೆ ಕೂಡ ನೀಡಲಾಗಿದೆ. ಹೀಗಾಗಿ, ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮೀನುಗಾರಿಕಾ ಬೋಟುಗಳು ಸದ್ಯ ಕಾರವಾರ ಬಂದರಿನಲ್ಲಿ ಆಶ್ರಯ ಪಡೆದಿವೆ.

ABOUT THE AUTHOR

...view details