ಬೈಕ್ ಸಮೇತ ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕನ ರಕ್ಷಣೆ: ವಿಡಿಯೋ - Dharwad news
ಧಾರವಾಡ: ಬೈಕ್ ಸಮೇತ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದಲ್ಲಿ ನಡೆದಿದೆ. ಅಣ್ಣಿಗೇರಿ ತಾಲೂಕಿನ ಕಿತ್ತೂರ ಗ್ರಾಮದ ಅಶೋಕ ಸೋಮರಡ್ಡಿ ರಕ್ಷಿಸ್ಲ್ಪಟ್ಟಿರುವ ಯುವಕ. ಗ್ರಾಮದ ಹೊರವಲಯದ ಹಂದಿಗ್ಯಾನ್ ಹಳ್ಳದಲ್ಲಿ ಈ ಘಟನೆ ನಡೆದಿದೆ. ಹಳ್ಳದ ಸೇತುವೆ ಮೇಲೆ ರಭಸವಾಗಿ ಮಳೆ ನೀರು ಹರಿಯುತ್ತಿತ್ತು. ಈ ವೇಳೆ ಸೇತುವೆ ದಾಟುವಾಗ ಯುವಕ ಬೈಕ್ ಸಮೇತ ಹಳ್ಳಕ್ಕೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಹಗ್ಗದ ಸಹಾಯದಿಂದ ಯುವಕ ಮತ್ತು ಬೈಕ್ಅನ್ನು ರಕ್ಷಣೆ ಮಾಡಿದ್ದಾರೆ.