ಹಾಸನದಲ್ಲಿ ರೆಮ್ಡಿಸಿವಿರ್ ಲಸಿಕೆ ಕೊರತೆ ಇದೆ : ಸಂಸದ ಪ್ರಜ್ವಲ್ ರೇವಣ್ಣ - ರೆಮ್ಡಿಸಿವಿರ್ ಲಸಿಕೆ ಕೊರತೆ
ಬೆಂಗಳೂರಿನಲ್ಲಿ ಬೆಡ್ ದಂದೆ ನೆಡೆಯುತ್ತಿದೆ ಎಂಬ ಆರೋಪ ಹಿನ್ನೆಲೆ ತೇಜಸ್ವಿ ಸೂರ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಆದ್ರೆ, ಇಂತಹ ವಿಚಾರದಲ್ಲಿ ಅವರದೇ ಸರ್ಕಾರ ಇದ್ರೂ ಎಲ್ಲರೂ ವಿಫಲವಾಗಿರೋದು ದುರಂತ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹಾಸನದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಪ್ರಕರಣದಲ್ಲಿ ಅಧಿಕಾರಿಗಳ ತಲೆದಂಡವಾಗಬೇಕಿತ್ತು. ಆದ್ರೆ, ಯಾವೊಬ್ಬರ ಅಧಿಕಾರಿಯ ತಲೆದಂಡ ಆಗಿಲ್ಲ ಎಂದರು. ನಮ್ಮಲ್ಲಿ ಬೆಡ್ ಕೊರತೆ ಜೊತೆ ರೆಮ್ಡಿಸಿವಿರ್ ಕೊರತೆಯೂ ಇದೆ ಎಂದಿದ್ದಾರೆ.