ಕೇಂದ್ರ ಶೀಘ್ರ ಪರಿಹಾರ ಬಿಡುಗಡೆ ಮಾಡಲಿದೆ: ಪ್ರಹ್ಲಾದ್ ಜೋಶಿ ಆಶ್ವಾಸನೆ - ಪ್ರಧಾನ ಮಂತ್ರಿ
ಪ್ರವಾಹ ಪರಿಹಾರದಲ್ಲಿ ಕರ್ನಾಟಕದ ಕುರಿತ ನಿರ್ಲಕ್ಷ್ಯ ವಿಚಾರಕ್ಕೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಪ್ರವಾಹ ಬಂದಿರುವ ಕಾರಣ ವರದಿಗಳು ಈಗ ಸಲ್ಲಿಕೆಯಾಗುತ್ತಿವೆ. ಪ್ರಧಾನ ಮಂತ್ರಿಗಳು ಈಗಷ್ಟೇ ಅಮೆರಿಕಾದಿಂದ ಬಂದಿದ್ದರಿಂದ ಶೀಘ್ರವೇ ಹಣ ಬಿಡುಗಡೆಯಾಗುತ್ತದೆ ಎಂದು ಭರವಸೆ ನೀಡಿದರು. ಬಿಹಾರಕ್ಕೆ ಯಾವುದೇ ನೆರವು ಕೊಟ್ಟಿಲ್ಲ, ಆದರೆ ನೆರವಿನ ಭರವಸೆಯ ಟ್ವಿಟ್ ಮಾಡಿದ್ದಾರಷ್ಟೇ. ಹಣ ಬಿಡುಗಡೆ ಬೇಗ ಆಗುತ್ತದೆ ಎಂದು ತಿಳಿಸಿದ್ದಾರೆ.