ಕರ್ನಾಟಕ

karnataka

ETV Bharat / videos

ಹೇಮಾವತಿ ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ​​: ಚಿಟ್​ಚಾಟ್​ - Hassan News

By

Published : Aug 8, 2020, 8:48 PM IST

ಹಾಸನ: ಹೇಮಾವತಿ ಜಲಾಶಯ ಬಹುತೇಕ‌ ಭರ್ತಿಯಾಗಿದ್ದು ಶುಕ್ರವಾರ ಸಂಜೆ 7 ಗಂಟೆಗೆ ಜಲಾಶಯದ 6 ಕ್ರಸ್ಟ್​ಗೇಟ್ ಮೂಲಕ 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇಂದು ಬೆಳಗ್ಗೆ 6 ಗಂಟೆಗೆ ನೀರು ಬಿಡುವುದನ್ನು ನಿಲ್ಲಿಸಲಾಗಿತ್ತು. ಹೇಮಾವತಿ ಅಣೆಕಟ್ಟು 2,922.00 ಅಡಿ ಸಾಮರ್ಥ್ಯ ಹೊಂದಿದ್ದು, ನಿನ್ನೆ 2,915.51 ಅಡಿ ಭರ್ತಿಯಾಗಿತ್ತು. ಇಂದು 2,916.62 ಅಡಿ ತುಂಬಿದೆ. ಸೋಮವಾರ ಐಸಿಸಿ ಸಭೆ ನಂತರ ಕಾವೇರಿ ನ್ಯಾಯಾಧೀಕರಣ ಆದೇಶದ ಬಂದ ಮೇಲೆ ನದಿಗೆ ನೀರು ಬಿಡಲಾಗುವುದು ಎಂದು ಹೇಮಾವತಿ ಜಲಾಶಯ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ABOUT THE AUTHOR

...view details