ತುಂಗಭದ್ರಾ ಜಲಾಶಯದ ಹೊರಹರಿವು ಇಳಿಕೆ:ಹಂಪಿ ಸ್ಮಾರಕಗಳಿಗೆ ಜೀವಕಳೆ - ತುಂಗಭದ್ರಾ ಡ್ಯಾಂ 2020,
ತುಂಗಭದ್ರಾ ಜಲಾಶಯದಿಂದ ಹೊರ ಹರಿವು ಪ್ರಮಾಣ ದಿನದದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈಗ ಸದ್ಯ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ. ನೀರಿನ ಪ್ರಮಾಣ ತಗ್ಗಿದ್ದರಿಂದ ಹಂಪಿಯ ನದಿಪಾತ್ರದಲ್ಲಿ ಮುಳುಗಿದ್ದ ಮಂಟಪಗಳು ಕಣ್ಣು ಬಿಡುತ್ತಿವೆ. ಕರ್ಮಾಧಿ ಮಂಟಪಗಳು ಕಾಣ ತೊಡಗಿವೆ. ಅಲ್ಲದೇ, ನದಿ ರಭಸ ಕಡಿಮೆಯಾಗಿದೆ. ಇನ್ನು ಚಕ್ರತೀರ್ಥ ಕೋದಂಡರಾಮ ಹಾಗೂ ಯತ್ರೋದ್ಧಾರಕ ದೇವಸ್ಥಾನಕ್ಕೆ ಹೋಗುವ ಒನಕೆ ಕಿಂಡಿ ಕಾಲುದಾರಿ ನೀರಿನಿಂದ ಮುಕ್ತಿ ಹೊಂದಿದೆ. ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಓಡಾಟಕ್ಕೆ ಅನುಕೂಲವಾಗಿದೆ. ಸೆ.21 ರಂದು ತುಂಗಭದ್ರಾ ಜಲಾಶಯದಿಂದ ನದಿಗೆ ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ಹರಿ ಬಿಡಲಾಗಿತ್ತು. ಇದರಿಂದ ಹಂಪಿ ನದಿ ಪಾತ್ರದ ಸ್ಮಾರಕಗಳ ಮುಳಗಡೆ ಆಗಿದ್ದವು.