ಮಳೆಯ ಹೊಡೆತಕ್ಕೆ ಮೆಣಸಿನಕಾಯಿ ಸಂಪೂರ್ಣ ಹಾಳು.. ರೈತರ ಗೋಳು ಕೇಳೋರ್ಯಾರು? - redchilli crop demolished due to heavy rain
ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನೂರಾರು ರೈತರು ಬೆಳೆದಿದ್ದ ಮೆಣಸಿನಕಾಯಿ ಮಳೆನೀರಿನಿಂದ ನಾಶವಾಗಿದೆ. ಬಯಲು ಭೂಮಿಯಲ್ಲಿ ಬಿಸಿಲಿಗೆ ಒಣಗಿಸಲು ಹಾಕಿದ್ದ ಮೆಣಸಿನಕಾಯಿ ನಿನ್ನೆ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ಮಳೆಗೆ ಹಸಿಯಾಗಿ ಹಾಳಾಗಿದೆ. ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿರುವ ಈ ಕೊಳಗಲ್ಲು ಗ್ರಾಮದ ರೈತರು ತಮ್ಮ ನೋವನ್ನು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.