ಕೊರೊನಾ ಹೊಡೆತಕ್ಕೆ ತುಮಕೂರಿನಲ್ಲಿ ಮಕಾಡೆ ಮಲಗಿದ ರಿಯಲ್ ಎಸ್ಟೇಟ್ ಉದ್ಯಮ! - ತುಮಕೂರು ಸುದ್ದಿ
ತುಮಕೂರು: ಕೊರೊನಾ ಬಿಕ್ಕಟ್ಟು ಆರಂಭವಾದಾಗಿನಿಂದ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಕಾಡೆ ಮಲಗಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಉದ್ದಿಮೆದಾರರು ಕೂಡ ಹಣ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಒಂದರಿಂದ ಎರಡು ವರ್ಷಗಳ ತನಕ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದ್ದು, ಬಳಿಕ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಉದ್ದಿಮೆದಾರರ ಅಭಿಪ್ರಾಯ.