ಬಾಬ್ರಿ ಮಸೀದಿ ಧ್ವಂಸ ತೀರ್ಪು ಸ್ವಾಗತಿಸಿದ ಧಾರವಾಡದ ಕರಸೇವಕ
ಧಾರವಾಡ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರನ್ನು ಖುಲಾಸೆಗೊಳಿಸಿ ಇಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪುನ್ನು ಕರಸೇವಕರು ಸ್ವಾಗತಿಸಿದ್ದಾರೆ. ಅಂದು 1992ರಲ್ಲಿ ವಿವಾದಿತ ಕಟ್ಟಡ ಬಿದ್ದಿತ್ತು. ಅದು ಪೂರ್ವನಿಯೋಜಿತವಲ್ಲ ಎಂದು ಕೋರ್ಟ್ ಹೇಳಿದೆ. ಈ ಮಹತ್ವದ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಅಂದು ಕರಸೇವಕರಾಗಿ ಭಾಗವಹಿಸಿದ್ದ ಧಾರವಾಡದ ರವೀಂದ್ರ ಯಲಿಗಾರ ತಿಳಿಸಿದ್ದಾರೆ. ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಅವರು, ಸ್ಥಳ ರಾಮಮಂದಿರಕ್ಕೆ ಸೇರಿದ್ದು ಎಂದು ಕೋರ್ಟ್ ತಿಳಿಸಿದೆ. ಬಾಬ್ರಿ ಮಸೀದಿ ಧ್ವಂಸದಲ್ಲಿ ಬಿಜೆಪಿ ನಾಯಕರನ್ನು ಖುಲಾಸೆಗೊಳಿಸಿರುವುದು ಸಮಸ್ತ ಭಾರತೀಯರಿಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ನಾಯಕರು ದೇಶದಲ್ಲಿ ಸೌಹಾರ್ದ ಕಾಯ್ದುಕೊಂಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.