ಯಸ್ ಬ್ಯಾಂಕ್ ಇದೀಗ ನೋ ಬ್ಯಾಂಕ್! ಗ್ರಾಹಕರ ಪರದಾಟ, ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ - ಖಾತೆದಾರರ ಹಣ ಸೇಫ್ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ವಸೂಲಾಗದ ಸಾಲ(NPA)ದ ಮಿತಿ ಹೆಚ್ಚಳವಾಗಿ ಭಾರಿ ನಷ್ಟ ಅನುಭವಿಸುತ್ತಿರುವ ಯಸ್ ಬ್ಯಾಂಕ್‌ಗೆ ಆರ್‌ಬಿಐ ಶಾಕ್ ನೀಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಯಸ್ ಬ್ಯಾಂಕ್ ವ್ಯವಹಾರವನ್ನು ರದ್ದು ಮಾಡಲಾಗಿದೆ. ಇದರ ಪರಿಣಾಮ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಒಂದೆಡೆಯಾದ್ರೆ, ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಲು ಗ್ರಾಹಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ಕುರಿತ ಒಂದು ವರದಿ ಇಲ್ಲಿದೆ.