ಕರ್ನಾಟಕ

karnataka

ETV Bharat / videos

ರಾಯಣ್ಣ, ಶಿವಾಜಿ ಇಬ್ಬರೂ ದೇಶಕ್ಕಾಗಿ ಹೋರಾಟ ಮಾಡಿದವರು: ಶಾಸಕ ಕುಮಾರಸ್ವಾಮಿ - Mudigere MLA

By

Published : Aug 31, 2020, 12:40 PM IST

ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಇಬ್ಬರೂ ದೇಶಕ್ಕಾಗಿ ಹೋರಾಟ ಮಾಡಿದವರು. ಇವರಿಬ್ಬರೂ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ದೇಶಕ್ಕಾಗಿ ಹೋರಾಟ ಮಾಡಿ, ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ರಾಷ್ಟ್ರ ಭಕ್ತರ ವಿಚಾರದಲ್ಲಿ ಜಾತಿಯನ್ನು ತಂದಿಟ್ಟು ನಮ್ಮ ಜಾತಿ ಪ್ರತಿಮೆ ಇಲ್ಲಿರಬೇಕು ಎಂದು ಕ್ಷುಲ್ಲಕ ಮನಸ್ಸಿನಿಂದ ಹೋರಾಟ ಮಾಡುತ್ತಿರುವುದು ತಪ್ಪು. ಈ ಸಮಸ್ಯೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಗೆಹರಿಸುವ ವಿಶ್ವಾಸವಿದೆ. ಸಣ್ಣ ಮನಸ್ಸಿನಿಂದ ಗಲಾಟೆ ಮಾಡುತ್ತಿರುವವರು ಯೋಚನೆ ಮಾಡಬೇಕು. ಇವರು ರಾಷ್ಟ್ರಕ್ಕಾಗಿ ಹೋರಾಟ ಮಾಡಿ ಮಾಡಿದವರು. ನಾವು ಅದೇ ದೃಷ್ಟಿಯಲ್ಲಿ ಇವರನ್ನು ನೋಡಬೇಕು. ನಾವು ಸಂಗೊಳ್ಳಿ ರಾಯಣ್ಣನನ್ನು ವಿರೋಧಿಸಬಾರದು. ಅದೇ ರೀತಿ ಶಿವಾಜಿಯನ್ನೂ ವಿರೋಧಿಸಬಾರದು. ಯಾರೊಬ್ಬರೂ, ಜನಾಂಗದ ದೃಷ್ಟಿಯಲ್ಲಿ ಇವರನ್ನು ನೋಡಬಾರದು ಮತ್ತು ವಿರೋಧಿಸಬಾರದು ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details