ಕರ್ನಾಟಕ

karnataka

ETV Bharat / videos

ಕ್ಷೇತ್ರದ ಜನರ ಮುಂದಷ್ಟೇ ನಮ್ಮ ಸಂಸದರ ಪೌರುಷ: ರವಿಕೃಷ್ಣಾರೆಡ್ಡಿ ಕಿಡಿ - ಭೀಕರ ಪ್ರವಾಹ

By

Published : Oct 4, 2019, 8:05 AM IST

ರಾಮನಗರ: ರಾಜ್ಯದ ನೆರೆಗೆ ಸ್ಪಂದಿಸದ 25 ಸಂಸದರು ಅಯೋಗ್ಯರು ಮತ್ತು ಅನರ್ಹರು. ಇವರೆಲ್ಲ ತಮ್ಮ ಯೋಗ್ಯತೆಯಿಂದಾಗಿ ಚುನಾವಣೆಯಲ್ಲಿ ಗೆದ್ದಿಲ್ಲ. ಪ್ರಧಾನಿ ಮೋದಿ ಹೆಸರಿನಲ್ಲಿ ಗೆದ್ದಿರುವವರು. ಅವರ ಮುಂದೆ ನಿಂತು ರಾಜ್ಯದ ನೆರೆಗೆ ಪರಿಹಾರ ಕೇಳುವ ಯೋಗ್ಯತೆ, ಸ್ವಾಭಿಮಾನ, ಅರ್ಹತೆ ಇವರಲ್ಲಿ ಇಲ್ಲ. ಸಂಸದರ ಪೌರುಷ, ಮಾಧ್ಯಮಗಳು ಮತ್ತು ಅವರು ಪ್ರತಿನಿಧಿಸುವ ಕ್ಷೇತ್ರದ ಜನರ ಮುಂದೆ ಅಷ್ಟೇ. ರಾಜ್ಯದ ಜನರು ಪ್ರವಾಹಕ್ಕೆ ಸಿಕ್ಕು ತತ್ತರಿಸಿದ್ದಾರೆ. ಆದರೆ, ನರೇಂದ್ರ ಮೋದಿಯವರು ಒಂದು ಟ್ವೀಟ್ ಕೂಡ ಮಾಡಿಲ್ಲ. ಚಂದ್ರಯಾನ-2 ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದ ಪ್ರಧಾನಿಗಳು, ನೆಪ ಮಾತ್ರಕ್ಕೂ ರಾಜ್ಯದ ಮುಖ್ಯಮಂತ್ರಿಗಳ ಜೊತೆ ನೆರೆ ಸಂಬಂಧ ಚರ್ಚೆ ಮಾಡಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details