ಜಿಲ್ಲಾಧಿಕಾರಿ ಕಚೇರಿಗೆ ಬಂದ ಕೇರೆ ಹಾವು ರಕ್ಷಣೆ - Rat snake rescued in chikkamagalur district
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕಚೇರಿಯ ಮಹಾತ್ಮ ಗಾಂಧಿ ಪುತ್ಥಳಿ ಬಳಿಯ ಉದ್ಯಾನದಲ್ಲಿ ಕೇರೆ ಹಾವು ಪ್ರತ್ಯಕ್ಷವಾಗಿ ಅಲ್ಲಿರುವ ಸಿಬ್ಬಂದಿಗೆ ಗಾಬರಿ ಹುಟ್ಟಿಸಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ನರೇಶ್, ಪೈಪಿನೊಳಗೆ ಅವಿತಿದ್ದ ಹಾವನ್ನು ರಕ್ಷಿಸಿ ನಗರದ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಟ್ಟರು.