ವಿಜ್ಞಾನ ವಿಭಾಗದಲ್ಲಿ ಕುಂದಾನಗರಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮನದಾಳದ ಮಾತು - undefined
ನಗರದ ಜೆಎಸ್ಎಸ್ ಮಹಾವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಸಯೀಶ್ ಮೆಂಡಕೆ, 98.50 ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದಾರೆ. ರಸಾಯನಶಾಸ್ತ್ರದಲ್ಲಿ 100 ಅಂಕ ಗಳಿಸಿದ್ದು, ಗಣಿತ, ಜೀವಶಾಸ್ತ್ರ, ಭೌತಶಾಸ್ತ್ರ ಹಾಗೂ ಹಿಂದಿಯಲ್ಲಿ ತಲಾ 99 ಅಂಕ ಮತ್ತು ಇಂಗ್ಲಿಷ್ ವಿಷಯದಲ್ಲಿ 95 ಅಂಕ ಗಳಿಸಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದಾರೆ. ತಂದೆ-ತಾಯಿ ಸಹಕಾರ ಚೆನ್ನಾಗಿತ್ತು ಹಾಗೂ ಶಿಕ್ಷಕರ ಉತ್ತಮ ಬೋಧನೆಯಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಮ್ಮ ಸಾಧನೆಯ ಗುಟ್ಟನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ ವಿದ್ಯಾರ್ಥಿ ಸಯೀಶ್.