ಇವು ಪ್ರಿಂಟ್ ಮಾಡಿದ ಚಿತ್ರಗಳಲ್ಲ.... ರಂಗೋಲಿಯಲ್ಲಿ ಅರಳಿದ ಕಲಾಂ, ಮೋದಿ, ವೀರಾಂಜನೇಯ - ಇತ್ತೀಚಿನ ಕಾರವಾರ ಸುದ್ದಿ
ನವರಾತ್ರಿ ನಿಮಿತ್ತ ಕಾರವಾರ ತಾಲೂಕಿನ ಸದಾಶಿವಗಡದ ಶಿವಾಜಿ ಪದವಿಪೂರ್ವ ಕಾಲೇಜಿನಲ್ಲಿ ರಂಗೋಲಿ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ, ಕಲಾಕಾರರ ಕೈಯಲ್ಲಿ ಅರಳಿದ ಪ್ರಧಾನಿ ನರೇಂದ್ರ ಮೋದಿ, ದಿವಂಗತ ಡಾ.ಎಪಿಜೆ ಅಬ್ದುಲ್ ಕಲಾಂ, ದಿ. ಸುಷ್ಮಾ ಸ್ವರಾಜ್, ವಿರಾಟ್ ಕೊಹ್ಲಿ, ಚಂದ್ರಯಾನ 2, ಮೀನು ಕತ್ತರಿಸುತ್ತಿರುವ ಅಜ್ಜಿ ಸೇರಿದಂತೆ ಚುಕ್ಕೆ ರಂಗೋಲಿಗಳನ್ನು ನೋಡುವುದಕ್ಕೆ ಎರಡು ಕಣ್ಣುಗಳೇ ಸಾಲದಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಕಲಾಕಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಇನ್ನು ಬಹುತೇಕರು ರಂಗೋಲಿಗಳನ್ನು ರಂಗೋಲಿ ಹಿಟ್ಟಿನಿಂದ ಬಿಡಿಸಿ ಬಣ್ಣ ತುಂಬಿದ್ದರೇ, ಇನ್ನು ಕೆಲವರು ಹೂವಿನ ಎಸಳು, ಅಕ್ಕಿ, ನಾಣ್ಯ, ಮರಳಿನಲ್ಲಿ ರಂಗೋಲಿಗಳನ್ನು ಬಿಡಿಸಿದ್ದು ವಿಶೇಷವಾಗಿತ್ತು.