ಖಾಸಗಿ ಬಸ್ಗಳಿಂದಲೇ ನಷ್ಟ... ಲಾಭದತ್ತ ಮುಖಮಾಡಲು ಹೊಸ ಬಸ್ ಖರೀದಿ...! - ಸರ್ಕಾರ ಹೊಸ ಬಸ್ ಖರೀದಿಸಲು ಮುಂದಾಗಿದೆ
ರಾಣೆಬೆನ್ನೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸಲು ಇಲಾಖೆಯು ಉತ್ತಮ ಕೆಲಸ ಮಾಡಲಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮ ಮಂಡಳಿ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದರು. ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರ ಹಾಗೂ ಸಿಬ್ಬಂದಿ ಕೊರತೆ ಆಲಿಸಿ ಮಾತನಾಡಿದರು. ರಾಜ್ಯದಲ್ಲಿ ಖಾಸಗಿ ಬಸ್ ಸಂಚಾರದಿಂದ ಇಲಾಖೆಗೆ ನಷ್ಟ ಉಂಟಾಗುತ್ತಿದೆ. ಇದನ್ನು ಸರಿದೂಗಿಸುವ ಕಾರ್ಯಕ್ಕೆ ಸರ್ಕಾರ ಹೊಸ ಬಸ್ ಖರೀದಿಸಲು ಮುಂದಾಗಿದೆ. ಆದರೆ, ಇಲಾಖೆಯಲ್ಲಿ ಚಾಲಕರ ಕೊರತೆಯಿದ್ದು, ಇದನ್ನು ಸರಿಪಡಿಸಲು ಉಚಿತವಾದ ತರಬೇತಿ ಹಾಗೂ ಪರವಾನಗಿ ನೀಡಲು ಇಲಾಖೆ ಮುಂದಾಗಿದೆ ಎಂದರು.