ಅಕ್ಕಪಕ್ಕದ ಹಳ್ಳಿಗಳ ಜನರ ಜೀವನಾಡಿ... ಅಭಿವೃದ್ಧಿಗಾಗಿ ಕಾಯುತ್ತಿರುವ ಮೇಡ್ಲೇರಿ ಕೆರೆ! - ಮೇಡ್ಲೇರಿ ಕೆರೆ ಕೆರೆ ಒತ್ತುವರಿ ತೆರವುಗೊಳಿಸುವಂತೆ ಆಗ್ರಹ
ರಾಣೆಬೆನ್ನೂರು: ಅದು ಅಕ್ಕಪಕ್ಕದ ಹತ್ತಾರು ಹಳ್ಳಿಗಳ ರೈತರಿಗೆ ನೀರಿನ ಆಸರೆ ಒದಗಿಸುತ್ತಿರುವ ಕೆರೆ. ವರ್ಷವಿಡೀ ಜನ, ಜಾನುವಾರುಗಳಿಗೆ ಬರ ನೀಗಿಸುವ ಕೆರೆ ಈಗ ಒತ್ತುವರಿಯಾಗಿದೆ ಎಂಬ ಆರೋಪಗಳು ಕೇಳಿ ಬರ್ತಿವೆ. ಹಾಗಾಗಿ ಜನೋಪಯೋಗಿ ಕೆರೆಯನ್ನು ಜನಪ್ರತಿನಿಧಿಗಳು ಕೂಡಲೇ ಅಭಿವೃದ್ಧಿ ಮಾಡಬೇಕೆಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ.