ಕರ್ನಾಟಕ

karnataka

ETV Bharat / videos

ನಮ್ಮಣ್ಣ ಮಂತ್ರಿನೇ ಆಗ್ತಿಲ್ಲ, ಸಿಎಂ ಹೆಂಗ್ ಆಗ್ತಾನ್ರಿ: ರಮೇಶ್ ಕತ್ತಿ ಹಾಸ್ಯ ಚಟಾಕಿ - ರಮೇಶ್ ಕತ್ತಿ ಹಾಸ್ಯ ಚಟಾಕಿ

By

Published : Oct 29, 2020, 2:02 PM IST

ಬೆಳಗಾವಿ: ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು ಎಂಬ ಬಯಕೆ ಜನರಲ್ಲಿದೆ. ಬಹಳ ವರ್ಷಗಳಿಂದ ಈ ಭಾಗದವರು ಸಿಎಂ ಆಗಿಲ್ಲವೆಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ಮಂತ್ರಿನೇ ಆಗವಲ್ಲ, ಇನ್ನ, ಮುಖ್ಯಮಂತ್ರಿ ಹೆಂಗ್ ಆಗ್ತಾನ್ರಿ. ಸಹೋದರನಿಗೆ ಸಿಪಾಯಿ ಆಗಾಕ್ ಆಗವಲ್ದು, ಡಿಸಿ ಹೆಂಗ್ ಆಗ್ತಾನಾ ಎಂದು ಹಾಸ್ಯ ಚಟಾಕಿ ಹಾರಿಸಿದ್ರು. ತಾನು ಹಿರಿಯ ರಾಜಕಾರಣಿ ಅನುಭವ ಜಾಸ್ತಿ ಐತಿ ಅಂತಾ ಉಮೇಶ್ ಕತ್ತಿ ಹೇಳಿದ್ದಾರೆ. ಮೂವರು ಸಿಎಂಗಳ ಕೈಯಲ್ಲಿ ಹದಿಮೂರುವರೆ ವರ್ಷ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಅನುಭವ ಇದೆ, ಸಿಎಂ ಆಗುವ ಎಲ್ಲ ಅರ್ಹತೆ ಅವರಿಗಿದೆ. ಈ ನಿಟ್ಟಿನಲ್ಲಿ ಸಿಎಂ ಆಗ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಎಂದು ರಮೇಶ್​ ಕತ್ತಿ ಪ್ರತಿಕ್ರಿಯಿಸಿದರು.

ABOUT THE AUTHOR

...view details