32ನೇ ರಸ್ತೆ ಸುರಕ್ಷತಾ ಮಾಸಾಚರಣೆ: ಮಹಿಳಾ ಬೈಕ್ ಸವಾರರಿಂದ ಜಾಗೃತಿ ಱಲಿ - ಬೆಂಗಳೂರು ನಗರ ಸಂಚಾರಿ ಪೊಲೀಸ್
ಬೆಂಗಳೂರು ನಗರ ಸಂಚಾರಿ ಪೊಲೀಸರಿಂದ ಇಂದು ಕಂಠೀರವ ಸ್ಟೇಡಿಯಂನಲ್ಲಿ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಆಚರಣೆ ಮಾಡಲಾಯಿತು. ಮಹಿಳಾ ಬೈಕ್ ಸವಾರು ಱಲಿ ಮಾಡುವ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ್ರು. ಕಂಠೀರವ ಸ್ಟೇಡಿಯಂನಿಂದ ವಿಧಾನಸೌಧದವರೆಗೂ ಬೈಕ್ ಱಲಿ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಱಲಿಯಲ್ಲಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಡಿಸಿಪಿ ಇಷಾ ಪಂತ್, ಡಿಸಿಪಿ ಸೌಮ್ಯಲತಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಮಹಿಳಾ ಬೈಕ್ ಸವಾರರ ಱಲಿ ಮೂಲಕ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.