ಕತ್ತಿಗೆ ಚನ್ನಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ: ಈಟಿವಿ ಭಾರತ ಜೊತೆ ಮನದ ಮಾತು - Rajyotsava Award 2019
ಶಿವಮೊಗ್ಗ: ಕತ್ತಿಗೆ ಚನ್ನಪ್ಪನವರ ಸಮಾಜ ಸೇವೆ ಗುರುತಿಸಿ ರಾಜ್ಯ ಸರ್ಕಾರವು ಈ ಸಾಲಿನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ'ಗೆ ಅವರನ್ನು ಆಯ್ಕೆ ಮಾಡಿದೆ. ಶಿವಮೊಗ್ಗದ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿಯಾಗಿರುವ ಕತ್ತಿಗೆ ಚನ್ನಪ್ಪನವರು ಮೂಲತಃ ದಾವಣಗೆರೆ ಜಿಲ್ಲೆ ಹಾಲಿ ನ್ಯಾಮತಿ ತಾಲೂಕಿನ ಕತ್ತಿಗೆ ಗ್ರಾಮದವರು. ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಶಸ್ತಿ ಲಭಿಸಿರುವ ಬಗ್ಗೆ ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡಿದ್ದಾರೆ.