ಮೈಸೂರಲ್ಲಿ ಅಣ್ಣಾವ್ರ ಜಯಂತಿ ಆಚರಣೆ... ಡಾ. ರಾಜ್ ಉದ್ಯಾನವನದಲ್ಲಿ ಫೀಸ್ ಎಷ್ಟು ಗೊತ್ತಾ? - undefined
ಮೈಸೂರು: ಜಿಲ್ಲಾಡಳಿತ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳಿಂದ ವರನಟ ಡಾ.ರಾಜ್ಕುಮಾರ್ ಅವರ ಜಯಂತಿಯನ್ನು ಆಚರಿಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗವಿರುವ ಡಾ.ರಾಜ್ಕುಮಾರ್ ಉದ್ಯಾನವನದಲ್ಲಿ ಪ್ರತಿಮೆಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಪುಷ್ಪಾರ್ಚನೆ ಮಾಡಿದರು. ನಂತರ ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿಗಳು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆದ್ರೆ ಈ ಉದ್ಯಾನದಲ್ಲಿ ಫೋಟೋ, ವಿಡಿಯೋ ಶೂಟಿಂಗ್ಗೆ 300 ರೂ. ನಿಗದಿ ಮಾಡಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.