ಗಡಿ ಬಂದ್.... ಚೆಕ್ಪೋಸ್ಟ್ ಬಳಿಯೇ ಉಳಿದ ರಾಜಸ್ಥಾನದ ಕಾರ್ಮಿಕರು - ಬೀದರ್ ಗಡಿಯಲ್ಲಿ ಕಾರ್ಮಿಕರ ವಾಸ
ಕೊರೊನಾ ವೈರಸ್ ನಿತ್ಯ ಕೂಲಿ ಕಾರ್ಮಿಕರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಾಗಲಕೋಟೆ ಜಿಲ್ಲೆಯ ಗಡಿ ಭಾಗದ ಇಲಕಲ್ಲ ಬಳಿ ಹಾಕಿರುವ ಚೆಕ್ ಪೋಸ್ಟ್ನಲ್ಲಿ ರಾಜಸ್ಥಾನ ರಾಜ್ಯಕ್ಕೆ ಹೋಗುವ ಕಾರ್ಮಿಕರನ್ನು ತಡೆ ಹಿಡಿಯಲಾಗಿದೆ. ಬೆಂಗಳೂರು, ಶಿರಾ, ತುಮಕೂರು ಹಾಗೂ ಹೊಸಪೇಟೆ ಸೇರಿದಂತೆ ಇತರ ಪ್ರದೇಶದಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕಾರ್ಮಿಕರು ತಮ್ಮ ಗ್ರಾಮಕ್ಕೆ ಸೇರುವುದಕ್ಕೆ ಹರಸಾಹಸ ಪಡುತ್ತಿದ್ದು, ಈಗ ಬಾಗಲಕೋಟೆ ಜಿಲ್ಲೆಯ ಗಡಿಭಾಗದಲ್ಲಿದ್ದಾರೆ. ಅವರನ್ನು ಮರಳಿ,ರಾಜಸ್ಥಾನಕ್ಕೆ ಕಳಿಸಬೇಕು ಅಥವಾ ಈಗ ಇದ್ದ ಸ್ಥಳಕ್ಕೆ ಕಳಿಸಬೇಕೊ ಎಂಬುದರ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.