ಕನ್ನಡ ಚಿತ್ರರಂಗದ ಮೆಲೋಡಿ ಹಾಡುಗಳ ಸರದಾರ ರಾಜನ್: ತಾರಾ ಅನುರಾಧಾ! - ಕನ್ನಡ ಚಿತ್ರರಂಗ
ಕನ್ನಡ ಚಿತ್ರರಂಗದ ಮೆಲೋಡಿ ಹಾಡುಗಳ ಸರದಾರ ಅಂತಾ ಕರೆಯಿಸಿಕೊಂಡಿದ್ದ ಸಂಗೀತ ನಿರ್ದೇಶಕ ರಾಜನ್ ಅವರು ಈಗ ನೆನಪು ಮಾತ್ರ. ಮೆಲೋಡಿ ಹಾಡುಗಳ ಮೂಲಕ ಕೋಟ್ಯಾಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕನಾಗಿದ್ದ ಅವರ ಕೊಡುಗೆ ಸಿನಿಮಾ ರಂಗಕ್ಕೆ ದೊಡ್ಡದು. ಅವರನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ಈ ವರ್ಷ ಚಿತ್ರರಂಗದಲ್ಲಿ ಸಂತೋಷಕ್ಕಿಂತ ನೋವೇ ಹೆಚ್ಚು ಎಂದು ನಟಿ ತಾರಾ ಅನುರಾಧ ಸಂತಾಪ ವ್ಯಕ್ತಪಡಿಸಿದರು.