ಬಿಸಿಲಿನಿಂದ ಬೆಂದ ಬೀದರ್ನಲ್ಲಿ ತಂಪೆರೆದ ತುಂತುರು ಮಳೆ.. - Rain in Bidar
ಲಾಕ್ಡೌನ್ ಹಾಗೂ ಭಯಾನಕ ಬಿಸಿಲಿನ ಧಗೆಯಿಂದ ಬೆಂದುಹೋಗಿದ್ದ ಗಡಿ ಜಿಲ್ಲೆಯಲ್ಲಿ ಇಂದು ತುಂತುರು ಮಳೆಯಾಗಿದ್ದು ಜನರು ಬೇಸಿಗೆಯಲ್ಲಿ ಮಳೆಗಾಲದ ಅನುಭವ ಸವಿದರು. ಸುಮಾರು ಎರಡು ಗಂಟೆಗಳ ಕಾಲ ಸತತವಾಗಿ ಸುರಿದ ಗುಡುಗು ಮಿಶ್ರಿತ ತುಂತುರು ಮಳೆ ನಗರದ ರಸ್ತೆಗಳನ್ನು ತಂಪಾಗಿಸಿತು. ಗುರುವಾರ ತಡರಾತ್ರಿವರೆಗೆ ಮಳೆಯಾಗಿತ್ತು. ಇಂದು ಮತ್ತೆ ಮಳೆಯಾಗಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.