ಹೊಸಪೇಟೆ ಎಪಿಎಂಸಿ ಆವರಣ ಕೆಸರುಗದ್ದೆ, ಸಂಕಷ್ಟದಲ್ಲಿ ಜನ - Hospet APMC
ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಎಂಪಿಎಂಸಿ ಆವರಣದ ಮುಂಭಾಗದಲ್ಲಿ ಕೊಳಚೆ ನೀರು ನಿಂತಿದೆ. ಜನರಿಗೆ ರಸ್ತೆ ಹಾಗೂ ತಗ್ಗುಗುಂಡಿಗಳು ಯಾವುದು ಎಂಬುದು ತಿಳಿಯದಂತಾಗಿದೆ. ಅಲ್ಲದೇ, ಎಪಿಎಂಸಿ ಒಳ ಭಾಗದ ತರಕಾರಿ ಮಾರುವ ಪ್ರದೇಶ ಕೆಸರು ಗದ್ದೆಯಾಗಿದೆ. ಹೀಗಾಗಿ, ತರಕಾರಿ ಕೊಳ್ಳಲು ಬರುತ್ತಿರುವ ಜನರಿಗೆ ತಿರುಗಾಡುವುದು ಸಂಕಷ್ಟವಾಗುತ್ತಿದೆ.