ರಾಜಧಾನಿ ಬೆಂಗಳೂರಿನಲ್ಲಿ ವರುಣನ ಅಬ್ಬರ... ಕೆರೆಯಂತಾದ ರಸ್ತೆ, ಸವಾರರ ಪರದಾಟ! - ಬೆಂಗಳೂರಿನಲ್ಲಿ ಏಕಾಏಕಿ ವರುಣನ ಅಬ್ಬರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಉದ್ಯಾನ ನಗರಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಏಕಾಏಕಿಯಾಗಿ ಸುರಿದ ಮಳೆಯಿಂದಾಗಿ ವಿವಿಧ ಪ್ರದೇಶಗಳಲ್ಲಿ ವಾಹನ ಸವಾರರು ಪರದಾಡಿದರು. ಪ್ರಮುಖವಾಗಿ ಲಾಲ್ಬಾಗ್ನ ಬಟಾನಿಕಲ್ ಗಾರ್ಡನ್ ಬಳಿಯ ರಸ್ತೆಯ ಕೆರೆಯಂತೆ ಕಂಡು ಬಂತು. ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.