ಮಲೆನಾಡಲ್ಲಿ ಮಳೆ ತಂದ ಅವಾಂತರ: ಕೆಲಸವಿಲ್ಲದೆ ಸಾಲ ಕಟ್ಟಲು ಜನರ ಪರದಾಟ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ನಿಂತ ಮೇಲೂ ಮಲೆನಾಡು ಭಾಗದ ಜನರ ಸಂಕಷ್ಟ ಕಡಿಮೆಯಾಗಿಲ್ಲ. ಈ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹತ್ತಾರು ಭಾಗದಲ್ಲಿ ಭೂ ಕುಸಿತ, ತೋಟಗಳು ನಾಶವಾಗಿವೆ. ಹೀಗಾಗಿ ಜನರಿಗೆ ಕೆಲಸವೇ ಇಲ್ಲದಂತಾಗಿದೆ. ಕಳೆದೆರಡು ತಿಂಗಳಲ್ಲಿ ಇಲ್ಲಿನ ಜನರಿಗೆ ಕೇವಲ ಏಳೆಂಟು ದಿನಗಳಷ್ಟೇ ಉದ್ಯೋಗ ಸಿಕ್ಕಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಉದ್ಯೋಗವಿಲ್ಲದೆ ಜೀವನೋಪಾಯಕ್ಕಾಗಿ ವಾರದ ಸಂಘ ಮತ್ತು ತಿಂಗಳ ಸಂಘದಲ್ಲಿ ಪಡೆದಂತಹ ಲೋನ್ ಹಣ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಆದ್ರೆ, ಸಂಘದವರು ಹಣ ಕಟ್ಟಲೇಬೇಕು ಎಂದೂ ಒತ್ತಡ ಹಾಕುತ್ತಿದ್ದು, ಜನರು ಹಣ ಕಟ್ಟೋದಕ್ಕೂ ಪರದಾಡುತ್ತಿದ್ದಾರೆ.