ಶ್ರೀರಾಮುಲು ಕಾರ್ಯಕ್ರಮಕ್ಕೆ ಮಳೆರಾಯನ ಅಡ್ಡಿ; ತಪ್ಪಿಸಿಕೊಳ್ಳಲು ಕುರ್ಚಿ ಮೊರೆಹೋದ ಜನ - ಚಿತ್ರದುರ್ಗ ಜಿಲ್ಲೆ ಸುದ್ದಿ
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ₹ 538 ಕೋಟಿ ವೆಚ್ಚದಲ್ಲಿ 59 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು. ಆದರೆ, ಈ ಭೂಮಿಪೂಜೆಗೆ ಮಳೆರಾಯ ಅಡ್ಡಿಪಡಿಸಿದನು. ಸಮಾರಂಭದಲ್ಲಿ ಭಾಗವಹಿಸಿದ್ದ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಕುರ್ಚಿಗಳ ಮೊರೆ ಹೋದರು. ಸುರಿಯುತಿರುವ ಮಳೆಯಲ್ಲೇ ಶ್ರೀರಾಮುಲು ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ ಹೋಗಳಿದರು. ಅಲ್ಲದೆ, ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರು.