ಹಾವೇರಿಯಲ್ಲಿ ತಗ್ಗಿದ ವರುಣಾರ್ಭಟ.. ನೀರಿನಲ್ಲಿ ಮುಳುಗಿದ ಗ್ರಾಮಗಳ ದೃಶ್ಯ ದ್ರೋಣ್ನಲ್ಲಿ ಸೆರೆ - ರೈತರ ಸಾವಿವಾರು ಎಕರೆ ಜಮೀನು
ಹಾವೇರಿ:ಜಿಲ್ಲೆಯಲ್ಲಿ ಇಂದು ವರುಣ ಸ್ವಲ್ಪ ಬಿಡುವು ನೀಡಿದ್ದಾನೆ. ಆದರೆ, ಜಿಲ್ಲೆಯ ನದಿಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಹಲವು ಗ್ರಾಮಗಳನ್ನ ಆಹುತಿ ತಗೆದುಕೊಂಡಿವೆ.ರೈತರ ಸಾವಿವಾರು ಎಕರೆ ಜಮೀನು, ಬೆಳೆದು ನಿಂತ ಬೆಳೆಗಳು ನೀರು ಪಾಲಾಗಿವೆ. ಈ ಎಲ್ಲಾ ದೃಶ್ಯ ದ್ರೋಣ್ ಕ್ಯಾಮೆರಾದಲ್ಲಿ ಸೆರೆಹಿಡಿದು ರೈತರಿಗಾದ ಹಾನಿಯನ್ನು ಲೆಕ್ಕಾಚಾರ ಹಾಕಲಾಗುತ್ತಿದೆ.