ಅವನು ಸೂರ್ಯ ಮುಳುಗೋದನ್ನೇ ಕಾಯುತ್ತಾನೆ.. ಹಾವೇರಿ ಮಂದಿಗೆ ಹೆದರಿಕೆ! - rainfall in haveri
ಹಾವೇರಿಯಲ್ಲಿ ಸೂರ್ಯ ಮುಳುಗಿದರೆ ಸಾಕು ಮತ್ತೆ ಮಳೆರಾಯನ ಆರ್ಭಟ ಶುರುವಾಗುತ್ತೆ. ಗುಡುಗು, ಸಿಡಿಲಿನೊಂದಿಗೆ ಮಳೆರಾಯ ಆರ್ಭಟಿಸುತ್ತಾನೆ. ಎಡೆಬಿಡದೆ ಸುರಿತಿರೋ ಧಾರಾಕಾರ ಮಳೆಗೆ ರಸ್ತೆಯಲ್ಲೆಲ್ಲಾ ನೀರು ಹರಿದು ಹೊಳೆಯ ಸ್ಥಿತಿ ನಿರ್ಮಾಣವಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ. ಕಳೆದ ನಾಲ್ಕೈದು ದಿನಗಳಿಂದ ಸಂಜೆ ಆಗುತ್ತಲೇ ಎಂಟ್ರಿ ಕೊಡೋ ಮಳೆರಾಯ ವಾಹನ ಸವಾರರಲ್ಲಿ ಮಾತ್ರವಲ್ಲದೆ, ರೈತರ ಮೊಗದಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದ್ದಾನೆ.