ಕೋಲಾರದಲ್ಲಿ ಜಿಟಿ ಜಿಟಿ ಮಳೆ: ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿ - ಮಳೆ
ಕೋಲಾರ: ಇಂದು ಮುಂಜಾನೆಯಿಂದಲೂ ನಗರದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದ್ದು, ಜಡಿಮಳೆ ಜೊತೆಗೆ ನಡುಗುವ ಚಳಿ ಜನರನ್ನು ಮನೆಯಲ್ಲೇ ಕಟ್ಟಿಹಾಕಿತ್ತು. ಕೆಲವರು ಮಳೆಯನ್ನು ಲೆಕ್ಕಿಸದೆ ತಮ್ಮ ಕೆಲಸಗಳಿಗೆ ಹೊರಡುತ್ತಿದ್ದರು. ಇನ್ನು ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಜನರ ಸಂಖ್ಯೆ ತೀರಾ ವಿರಳವಾಗಿತ್ತು. ಹತ್ತು ಗಂಟೆ ನಂತರ ಜಡಿ ಮಳೆ ನಿಂತಿತ್ತಾದರೂ ಮೋಡಕವಿದ ವಾತಾವರಣ ಮುಂದುವರೆದಿದೆ.
Last Updated : Jan 7, 2021, 4:26 PM IST