ಹಾವೇರಿ ಜಿಲ್ಲೆಯ ವಿವಿಧೆಡೆ ಮಳೆ: ಮನೆಗಳಿಗೆ ನೀರು ನುಗ್ಗಿ ಅವಾಂತರ - ಹಾನಗಲ್ ತಾಲೂಕಿನ ವಿವಿದೆಡೆ ಮಳೆ
ಹಾವೇರಿ : ಜಿಲ್ಲೆಯ ರಟ್ಟಿಹಳ್ಳಿ ಮತ್ತು ಹಾನಗಲ್ ತಾಲೂಕಿನಲ್ಲಿ ಇಂದು ಭಾರಿ ಮಳೆಯಾಗಿದೆ. ಮಳೆಯಿಂದ ರಟ್ಟಿಹಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾನಗಲ್ ತಾಲೂಕಿನ ಹೀರೆಹುಲ್ಲಾಳ, ಬಾಳಂಬೀಡ, ಅರಳೇಶ್ವರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.