ಕುಂದಾನಗರಿ ಬಿಡದ ವರುಣ, ಜನರಿಗೆ 'ಮಹಾ' ಆತಂಕ.. - ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಾಹನ ಸವಾರರು,ಪ್ರಯಾಣಿಕರು ಪರದಾಡುವಂತಾಗಿದೆ. ಜೂನ್ ಮೊದಲ ವಾರವೇ ವರುಣನ ಪ್ರವೇಶವಾಗಿದ್ರಿಂದ ವಾತಾವರಣ ಮಲೆನಾಡಿನಂತಾಗಿದೆ. ಮಳೆಯಿಂದಾಗಿ ವ್ಯಾಪಾರ, ವಹಿವಾಟು ಕುಂಠಿತಗೊಂಡಿದೆ. ಕೊರೊನಾ ಹೊಡೆತದಿಂದ ಈಗ ಚೇತರಿಸಿಕೊಳ್ಳುತ್ತಿರುವ ಜನರಿಗೆ ಮಳೆ ಮತ್ತೊಮ್ಮೆ ಮಹಾ ಆಘಾತ ನೀಡಲಿದೆಯೇ ಎಂಬ ಆತಂಕ ಶುರುವಾಗಿದೆ.