ಚಾಮುಂಡಿ ಬೆಟ್ಟದಲ್ಲಿ ಝರಿಗಳ ಸದ್ದು... ಸವಿಯಬನ್ನಿ ಜುಳು ಜುಳು ನಾದ ನಿನಾದ: ವಿಡಿಯೋ - ಚಾಮುಂಡಿ ಬೆಟ್ಟ
ಮೈಸೂರು: ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಚಾಮುಂಡಿ ಬೆಟ್ಟದಲ್ಲಿ ಸುಮಾರು 25 ಸಣ್ಣಪುಟ್ಟ ಝರಿಗಳು ಉದ್ಭವವಾಗಿದ್ದು, ಇಡೀ ಚಾಮುಂಡಿ ಬೆಟ್ಟವೇ ಝರಿಗಳಿಂದ ತುಂಬಿ ಹೋಗಿದೆ. ಅದರಲ್ಲಿ ದೇವಿಕೆರೆಯಿಂದ ದೊಡ್ಡ ಝರಿಯೊಂದು ಜಲಪಾತದ ರೀತಿಯಲ್ಲಿ ಬೆಟ್ಟದ ಮೇಲಿಂದ ಹರಿದು ಬೆಟ್ಟದ ಕೆಳಗೆ ಇರುವ ತಾವರೆಕಟ್ಟೆಯನ್ನು ಸೇರಿತ್ತಿದ್ದು, ಮೂರು ದಶಕಗಳ ಬಳಿಕ ತಾವರೆಕಟ್ಟೆ ಈಗ ಮತ್ತೆ ತುಂಬಿದೆ.