ಕಣ್ಣೀರುಳ್ಳಿ! ಕೊಯ್ಯುವ ಮುನ್ನವೇ ರೈತನ ಕಣ್ಣಲ್ಲಿ ನೀರು ಹಾಕಿಸಿದ ಉಳ್ಳಾಗಡ್ಡಿ - ಧಾರವಾಡ ಮಳೆ ಸುದ್ದಿ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ಹಾಳಾಗಿದ್ದು, ನಿರೀಕ್ಷಿಸಿದ ಫಸಲು ಕಾಣದೆ ರೈತ ಕಣ್ಣಲ್ಲಿ ನೀರು ಹಾಕುವಂತಾಗಿದೆ. ಉತ್ತಮ ಮಳೆಯಾಗಿದ್ದರೆ ಈ ಬಾರಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ರೈತನ ಕೈ ಹಿಡಿಯುತ್ತಿದ್ದವು. ಆದರೆ ಈ ಬಾರಿ ಸುರಿದ ಭಾರಿ ಮಳೆಗೆ ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳು ಕೆಲವು ಕಡೆ ಕೊಳೆತು ಹೋಗಿದ್ದು, ಇನ್ನು ಕೆಲವೆಡೆ ನೀರಲ್ಲಿ ಕೊಚ್ಚಿ ಹೋಗಿದೆ. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎನ್ನುವ ಸ್ಥಿತಿ ಜಿಲ್ಲೆಯ ರೈತನದ್ದಾಗಿದೆ.