ಚಲಿಸುವ ರೈಲಿನಲ್ಲೇ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಸಚಿವ ಸುರೇಶ ಅಂಗಡಿ.. - Southwest Railway Zone
ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಚಲಿಸುವ ರೈಲಿನಲ್ಲೇ ರೈಲ್ವೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಗಮನ ಸೆಳೆದರು. ಬೆಳಗಾವಿಯಿಂದ ಗೋವಾವರೆಗೆ ರೈಲಿನಲ್ಲಿ ಸಂಚರಿಸಿದ ಸಚಿವ ಸುರೇಶ ಅಂಗಡಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ನಡೆಸಿದರು. ಬೆಳಗಾವಿ-ಗೋವಾ ಮಾರ್ಗ ಮಧ್ಯೆ ಸಂಚರಿಸುವ ರೈಲಿನಲ್ಲಿ ಸಚಿವರು ಸಭೆ ನಡೆಸಿದರು. ನೈರುತ್ಯ ರೈಲ್ವೆ ವಲಯದ ಪ್ರಧಾನ ಅಭಿಯಂತರ ವಿಜಯಕುಮಾರ್, ಹುಬ್ಬಳ್ಳಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. ಗೋವಾದಲ್ಲಿಂದು ಸಂಜೆ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆಗೆ ಸಭೆ ನಡೆಸಲಿದ್ದಾರೆ ಸಚಿವ ಅಂಗಡಿ.