ರಾಯಚೂರಿನ ಜನತಾ ಕರ್ಫ್ಯೂ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಸೆರೆ! - ಕೊರೊನಾ ಸೋಂಕು
ರಾಯಚೂರು : ಕೊರೊನಾ ಸೋಂಕನ್ನು ತಡೆಗಟ್ಟುವ ಹಿನ್ನೆಲೆ ಪ್ರಧಾನಿ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಗಡಿನಾಡು ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದೆ. ಡಾ.ಬಿ ಆರ್ ಅಂಬೇಡ್ಕರ್ ಸರ್ಕಲ್, ಗಂಜ್ ಸರ್ಕಲ್, ಸದರ್ ಬಜಾರ್ ಮಾರ್ಕೆಟ್ ರಸ್ತೆ ಹಾಗೂ ಹರಿಹರ ರಸ್ತೆಗಳೆಲ್ಲವೂ ಜನರಿಲ್ಲದೇ ಬಣ ಬಣ ಎನ್ನುತ್ತಿದ್ದವು. ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಲಾಕ್ ಆಗಿವೆ. ಜನ ಸಹ ಮನೆಯಿಂದ ಹೊರಗೆ ಬಾರದೆ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.