40ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ವಾಹನ ಪಲ್ಟಿ - ರಾಯಚೂರು ರಸ್ತೆ ಅಪಘಾತ ನ್ಯೂಸ್
ರಾಯಚೂರು: ಕೆಲಸಗಾರರನ್ನು ಕೆರೆದೊಯ್ಯುತ್ತಿದ್ದ ಟಾಟಾ ಎಸಿ ವಾಹನ ಪಲ್ಟಿ ಹೊಡೆದಿದ್ದರಿಂದ ಆರು ಜನ ತೀವ್ರ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಂತಗೋಳದಲ್ಲಿ ನಡೆದಿದೆ. ಇಂದು ಪಪ್ಪಾಯಿ ತೋಟದ ಕೆಲಸಕ್ಕೆಂದು ಗುಂತಗೋಳ ತೋಟದಿಂದ ರಾಮಲೂಟಿಗೆ 40 ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಟಾಟಾ ಎಸಿಯಲ್ಲಿ ಕರೆದೊಯ್ಯುಲಾಗುತ್ತಿತ್ತು. ಚಾಲಕನ ನಿರ್ಲಕ್ಷ್ಯದಿಂದ ವಾಹನ ಪಲ್ಟಿ ಹೊಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಲಿಂಗಸುಗೂರು ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಅಸ್ಪತ್ರೆಗೆ ತೆರಳಿ ಮಾಹಿತಿ ಪಡೆದು, ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.