ಕ್ಯಾರೆ ಎನ್ನದ ಖಾಸಗಿ ವಾಹನ ಸವಾರರು: ಜನರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ - Raichur coronavirus news
ರಾಯಚೂರು/ ಲಿಂಗಸೂಗೂರು: ಕೊರೊನಾ ತಡೆಗೆ ಪ್ರಧಾನಿ ಮೋದಿ ಭಾರತ ಲಾಕ್ ಡೌನ್ಗೆ ಕರೆ ನೀಡಿದ್ದರೂ ಸಹ ಪ್ರಯಾಣಿಕರನ್ನು ಹೊತ್ತು ತರುತ್ತಿರುವ ಖಾಸಗಿ ವಾಹನಗಳು, ಬೈಕ್ ಸವಾರರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಕೂಡ ಸಾರ್ವಜನಿಕರು, ವಾಹನ ಚಾಲಕರು ಸಹಕರಿಸದಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.