ರಾಯಚೂರು: ದಿನಸಿ, ತರಕಾರಿ ಖರೀದಿಗೆ ಮುಗಿಬಿದ್ದ ಜನ
ರಾಯಚೂರು: ಜಿಲ್ಲೆಯಲ್ಲಿ ಇಂದು ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಮಾರುಕಟ್ಟೆ ಜಾತ್ರೆಯಂತೆ ಕಂಡು ಬಂತು. ಜನರು ಒಂದೆಡೆ ಸೇರದಂತೆ ತಡೆಯಲು ನಾನಾ ಕಡೆಗಳಲ್ಲಿ ತರಕಾರಿ ಮಾರುಕಟ್ಟೆ ಮಾಡಲು ನಿಗದಿತ ಸ್ಥಳ ಗುರುತಿಸಲಾಗಿದೆ. ಅದರಂತೆ ನಿಗದಿ ಸ್ಥಳದಲ್ಲೇ ತರಕಾರಿ ಮಾರಾಟ ಮಾಡಲಾಗಿದ್ದು, ತರಕಾರಿ ಕೊಳ್ಳಲು ಜನರು ಮುಗಿಬಿದ್ದಿದ್ದು ಕಂಡುಬಂತು. ಇನ್ನು ದಿನಸಿ ಅಂಗಡಿಗಳ ಮುಂದೆ ಜನರು ಅಧಿಕ ಸಂಖ್ಯೆಯಲ್ಲಿ ಸೇರಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಿದರು. ಈ ನಡುವೆ ಪೊಲೀಸರು ಮೈಕ್ನಲ್ಲಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದ್ದರು. ಕೆಲವರು ನಿಯಮ ಪಾಲಿಸಿದ್ರೆ, ಇನ್ನೂ ಕೆಲವರು ನಿಯಮಗಳನ್ನು ಗಾಳಿಗೆ ತೂರಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.