ನನ್ನ ನೀನು ಗೆಲ್ಲಲಾರೆ....'ಸಾಂಗ್' ಮೂಲಕ ಚೀನಾಗೆ 'ಟಾಂಗ್' ಕೊಟ್ಟ ಗ್ರಾಮೀಣ ಹುಡುಗಿ... - ಹಾಡಿನ ಮೂಲಕ ಚೀನಾದ ವಿರುದ್ಧ ಆಕ್ರೋಶ
ಜಿಲ್ಲೆಯ ಮಾನವಿ ತಾಲೂಕಿನ ಚಿಕಲಪರ್ವಿ ಗ್ರಾಮದ ನಿಹಾರಿಕಾ ವೈ ನಾಯಕ ಹಾಡಿನ ಮೂಲಕ ಚೀನಾದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಲನಚಿತ್ರದ ಸಂಗೀತಕ್ಕೆ ತಾನು ಬರೆದಿರುವ ಸಾಹಿತ್ಯವನ್ನ ಸಂಯೋಜಿಸಿ ಹಾಡನ್ನು ಹಾಡಿರುವ ಇವರು, ಭಾರತದ ವೀರ ಯೋಧರ ಸಾಮರ್ಥ್ಯವನ್ನ ಹೊಗಳಿದ್ದು, ಚೀನಾದ ಕಪಟ ಆಟ ನಮ್ಮ ಬಳಿ ನಡೆಯೊಲ್ಲ ಎನ್ನುವ ಎಚ್ಚರಿಕೆ ನೀಡಿದ್ದಾರೆ.