ಕರ್ನಾಟಕ

karnataka

ETV Bharat / videos

ಸೀತಾಫಲಕ್ಕೀಗ ರಾಯಚೂರಿನಲ್ಲಿ ಭಾರೀ ಬೇಡಿಕೆ - ಸೀತಾಫಲ ಹಣ್ಣು

By

Published : Oct 24, 2019, 3:27 PM IST

ರಾಯಚೂರು: ಸೀತಾಫಲಕ್ಕೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೇರಳ ಪೋಷಕಾಂಶಗಳ ಮಹತ್ವ ಅರಿತಿರುವ ಫಲಪ್ರಿಯರು ಈ ಹಣ್ಣಿಗಾಗಿ ಮುಗಿಬೀಳುತ್ತಿದ್ದಾರೆ. ರಾಯಚೂರಿಗೆ ಸೀತಾಫಲ ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳಿಂದ ಸರಬರಾಜಾಗುತ್ತಿದೆ. ಇಲ್ಲಿನ ಎಲ್ಐಸಿ ಕಚೇರಿ, ಚಂದ್ರಮೌಳೇಶ್ವರ ರಸ್ತೆ, ಗಂಜ್ ರಸ್ತೆ, ತೀನ್ ಖಂದಿಲ್ ವೃತ್ತದ ಬಳಿ ಹಣ್ಣಿನ ಮಾರಾಟ ಜೋರಾಗಿದೆ. ಈ ಹಿಂದೆ 1 ಕೆ.ಜಿಗೆ 20 ರಿಂದ 30 ರೂಪಾಯಿಗೆ ಸಿಗುತ್ತಿದ್ದ ಈ ಹಣ್ಣು, ಈಗ 100 ರೂಪಾಯಿಗೆ ಏರಿಕೆ ಕಂಡಿದೆ. ಪ್ರವಾಹದ ಪರಿಣಾಮ ಈ ಬಾರಿ ರಾಯಚೂರು ಭಾಗದಲ್ಲಿ ಸೀತಾಫಲ ಬೆಳೆ ಅಷ್ಟೇನೂ ಚೆನ್ನಾಗಿಲ್ಲ. ಗ್ರಾಹಕರು ವಿವಿದೆಡೆಗಳಿಂದ ಬಂದ ಹಣ್ಣುಗಳ ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ.

ABOUT THE AUTHOR

...view details